ಮಂಗಳವಾರ, ಆಗಸ್ಟ್ 5, 2014

ಧಾರಾಕಾರವಾದ ಮಳೆ, ಸೂರ್ಯ ತನ್ನ ತಾಯಿಯ ಮಡಿಲನ್ನು ಸೇರುವ ಸಮಯ ನಾನು ಆ ಮಳೆಗೆ ದೇಹವನ್ನು ತೋಯಿಸಿಕೊಂಡು ಬಂದು ಹಾಗೆ ಸ್ವಲ್ಪ ಸಮಯದ ನಂತರ ಹೊರಗಿನ ವರಾಂಡ ದಲ್ಲಿ ಚಹಾವನ್ನು ಹೀರುತ್ತ ಚಪ್ಪಲಿಗಳತ್ತ  ಕಣ್ಣು ಹರಿಸಿದೆ, ಚಪ್ಪಲಿ ಗಳು ತನ್ನ ಮೂಲಭೂತ ಬಣ್ಣ ಗಳನ್ನು ಕೆಳೆದು ಕೊಂಡು ನೀರು ಮತ್ತು  ಮಣ್ಣಿನಿಂದ ಮೆಂದು ಚಳಿ ಅಲ್ಲಿ ನಿಂತಿದ್ದವು,  ಅವು ನನ್ನಪ್ಪ ಸೋಮವಾರ ಸಂತೆ ಯಲ್ಲಿ ನನಗಾಗಿ ಕೊಂಡು ತಂದ ಚಪ್ಪಲಿಗಳು, ಚಪ್ಪಲಿ ಗಳನ್ನು ತಂದ ಹೊಸದರಲ್ಲಿ ಊರು ತುಂಬ ಹಾಕಿಕೊಂಡು ರಾಜ್ಯಭಾರ  ಮಾಡಿದ್ಹೆ ಮಾಡಿದ್ಹು ಚಪ್ಪಲಿ ಗಳಿಗೆ ಊರು ಸುತ್ತುವ ಖುಷಿ ಯಾದರೆ ನನಗೆ ಊರ ಜನಕ್ಕೆ ಚಪ್ಪಲಿಗಳನ್ನು ತೋರಿಸುವ ಖುಷಿ .

ಹೀಗೆ ಚಪ್ಪಲಿ ಮತ್ತು  ನಾನು ದಿನಗಳು ವರುಷಗಳನ್ನು ಕೆಳೆದವು, ಹಾಗೆ ನೋಡಿದರೆ ಇವುಗಳ ಸ್ನೇಹ ಮತ್ತು ಬಾಂದವ್ಯ  ಅಗಣಿತ, ಅವುಗಳು ನನ್ನನ್ನು ಮಳೆ, ಗಾಳಿ, ಬಿಸಿಲು ಮತ್ತು ಹೊಲಸು ಎನ್ನದೆ ಸತತವಾಗಿ ನನ್ನ ಕಾಲು ಗಳಿಗೆ ರಕ್ಷಾ ಕವಚವಾಗಿ ಇಡೀ ಆಯಸ್ಸನ್ನು ಸವೆಸಿ ಸೋತು ಸುಣ್ಣವಾಗಿ ನಿಂತಿವೆ,  ಹಾಗೆ ತಾನೆ ನಮ್ಮನ್ನು ಹುಟ್ಟಿಸಿದವರು ನಮ್ಮ ಹೇಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡು ಆಸೆ ಗಳನ್ನು ಮೋಡದ ಬದಿಗೊತ್ತಿ ಆಕಾಶವೇ ಧರೆಗೆ ಇಳಿದು ಬರುವ  ಹಾಗೆ ನಮ್ಮ ಶ್ರೇಯಸ್ಸಿಗೆ ದುಡಿಯುತ್ತಾರೆ, ಹೇಗೆ ಚಪ್ಪಲಿ ಗಳಲ್ಲಿ ಕ್ರಮೇಣ ಬದಲಾವಣೆ ಕಾಣಿಸುತದೆಯೋ ಹಾಗೆ ನಮ್ಮ ಜೀವನದಲ್ಲಿ ತಲೆ ಮಾರು ಗಳು ಉರುಳುತ್ತವೆ, ಸಂಸ್ಕೃತಿ ಮತ್ತು ಆಧುನಿಕತೆ ನಮ್ಮನ್ನು ಸುತ್ತುವರಿಯುತ್ತವೆ.

ಹಿಂಧೂ  ಸಂಸ್ಕೃತಿಯಲ್ಲಿ ದೇವಸ್ಥಾನವನ್ನು ಬಿಟ್ಟು ಉಳಿದ ಎಲ್ಲ ಸ್ಥಳಗಳಲ್ಲಿ ಚಪ್ಪಲಿ ಗಳಿಗೆ ಉಚಿತ ಪ್ರವೇಶ ಇರುತ್ತ ದೆ, ಚಪ್ಪಲಿಗಳಿಗೆ ದೇವಸ್ಥಾನ ಹೇಗೆಯೋ ಹಾಗೆ ನಮಗೂ ನಮ್ಮ ಮನಸ್ಸು ಒಂದು ದೇವಸ್ಥಾನ ಇದ್ದ ಹಾಗೆ ಅಲ್ಲಿ ಕೆಲವರಿಗಷ್ಟೇ ಸ್ಥಾನವಿರುತ್ತದೆ ಆದ್ದುದರಿಂದ ಅದನ್ನು ನಿರ್ಮಲ ವಾಗಿ ಇಟ್ಟುಕೊಳ್ಳಬೇಕು. 

ಕೆಲವೊಮ್ಮೆ ಚಪ್ಪಲಿಗಳನ್ನು ಹಾಕಿಕೊಂಡರು ಸಹ ಮುಳ್ಳು ಮತ್ತು ಕಲ್ಲುಗಳನ್ನು ತುಳಿವುವ   ಪ್ರಸಂಗಗಳು ಸಾಧಾರಣ, ಹೀಗೆ ಜೀವನದಲ್ಲಿ ದುಃಖ ಏಳುಬೀಳುಗಳು ಬರುತ್ತಿರುತವೆ ಅದನ್ನು ಎದುರುಸಿವ ಶಕ್ತಿಯನ್ನ್ನು ಹೊಂದಿರಬೇಕು, ಕೆಲವರು ಚಪ್ಪಲಿ ಗಳನ್ನು  ತುಳಿದು ಹೋಗುತ್ತಾ ರೆ, ಮಕ್ಕಳು ಅದನ್ನೇ ಆಟಿಕೆಯ ವಸ್ತುಗಳಾಗಿ ಪ್ರೀತಿಸುತ್ತಾರೆ ಹೀಗೆ ನಮ್ಮ ದಿನಚರಿಯಲ್ಲಿ ಕೆಲವರು ನಮ್ಮನ್ನು ತುಳಿಯಲಿಚ್ಹಿಸುತ್ತಾರೆ ಉಳಿದವರು ಪ್ರೀತಿಸುತ್ತಾರೆ ಮತ್ತು ಅಭಿನಂದಿಸುತ್ತಾರೆ.

ದಿನಗಳು ಕಳೆದಂತೆ  ಚಪ್ಪಲಿಗಳ ಉಂಗುಟ ಕಿತ್ತು ಬರುವ ಸಮಯ ಅದು, ಇನ್ನು ಮುಂದೆ ನನ್ನ ದೇಹದ ಭಾರ ಮತ್ತು ಕಾಲನ್ನು ರಕ್ಷಿಸುವ ಕೆಲಸವನ್ನು ನಿಲ್ಲಿಸುವ ಸಮಯ, ನಾವು ಹೀಗೆ ದುಡಿದು  ಸವೆದು ನಮ್ಮ ಗಡಿಯಾರದ ಮುಳ್ಳು ಕಾರ್ಯ ಮಾಡುವುದನ್ನು ನಿಲ್ಲಿಸಲೇ ಬೇಕು.

ಜೀವನ ಸುಮಧುರ, ಹುಟ್ಟು ಖ ಚಿತ, ಸಾವು ಅನಿಶ್ಚಿತ, ಹುಟ್ಟು ಸಾವು ಗಳ ನಡುವೆ ನಮ್ಮನ್ನು ಹೇಗೆ ನಿರೂಪಿಸುತ್ತೆವೆಯೋ  ಅದುವೇ  ಜೀವನ,  ಅಂತ್ಯದಲ್ಲಿ ನಾನು ಕುಳಿತ ವರಾಂಡದಿಂದಲೇ ಚಪ್ಪಲಿ ಗಳಿಗೆ ಧನ್ಯವಾದ ಹೇಳುವಾಗ ಗಲ್ಲಗಳು ಕಣ್ಣೀರಿನಿಂದ ತೋಯ್ದು, ಮಳೆ ನಿಂತು ಹೋಗಿ ಕಾಮನಬಿಲ್ಲು ಮೂಡಿತ್ತು, ಅದುವೆ ಜೀವನ!

ಇಂತಿ,. 
ದಿವಂಗತ